ಚಳಕ

ಲಿನಕ್ಸ್

ಮೇ - ೩೧, ಮೊದಲ ದಿನ

ಸಣ್ಣವನಿದ್ದಾಗಿಂದಲೂ ವಿಂಡೋಸ್ os ಅನ್ನು ಬಳಸಿ ಅಭ್ಯಾಸ ಇದ್ದೋನು, ೨೦೧೩ ರಲ್ಲಿ ಮೊದಲ ಬಾರಿಗೆ ಲಿನಕ್ಸ್ os ಅನ್ನ ನನ್ನ ಕಂಪ್ಯೂಟರ್ ಹಾಕಿಕೊಂಡು ಬಳಸೋ ಅವಕಾಶ ಸಿಕ್ತು. ಯಾವುದೋ ಒಂದು ಹೊಸ os ಅನ್ನ ಬಳಸಿ ಬಹಳ ಚೆನ್ನಾಗಾನ್ಸಿತ್ತು . ಅದಾದ ನಂತರ ಅದರ ಬಳಕೆ ತಪ್ಪಿ ಮತ್ತೆ ಸುಮಾರು ವರ್ಷಗಳ ಕಾಲ ವಿಂಡೋಸ್ os ಜೊತೆಗೆ ಕಾಲ ಕಳೆದಿದ್ದೆ . ಈಗ ೨೦೨೧, ಯಾಕೋ ಮತ್ತೆ ಲಿನಕ್ಸ್ ನೆನಪಾಗಿ ಬಳಸಿ ನೋಡೋಣ ಅನ್ನೋ ಯೋಚನೆಲಿ ಕಂಪ್ಯೂಟರ್ ಗೆ ಅದನ್ನ ಹಾಕ್ಕೊಂಡೆ. ಮೊದಲಂಗೆ ಚೆನ್ನಾಗನ್ನಿಸ್ತು .

ಆದರೆ ಬೇಕಿರೋ ಎಲ್ಲ ಸಾಫ್ಟ್ವೇರ್ ಪ್ರೋಗ್ರಾಮ್ ಗಳು ಇರುವ ವಿಂಡೋಸ್ OS ಅನ್ನು ಬಿಟ್ಟು ಲಿನಕ್ಸ್ OS ಕಡೆ ಹೋಗೋದು ಅಂದ್ರೆ ಒಂದು ದೊಡ್ಡ ಹೊಳೆನ ದಾಟಿ ಆಚೆ ಬದಿಯ ದಡಕ್ಕೆ ಸೇರಿದಂಥ ಅನುಭವನೇ ಕೊಡುತ್ತೆ . ಆದರೂ ಧೈರ್ಯ ಮಾಡಿ ಲಿನಕ್ಸ್ ಕಡೆ ಹೊರಟೆ. ೨೦೧೩ ರಿಂದ ಹಿಡಿಸಿದ್ದ ಲಿನಕ್ಸ್ ಮಿಂಟ್, ಪಾಪ್ os , ಉಬುಂಟು, ಮೂರು ಲಿನಕ್ಸ್ os ಗಳ ಆಯ್ಕೆ ನನ್ನ ಮುಂದಿದ್ವು. ಮೂರನ್ನು ನನ್ನ ಕಂಪ್ಯೂಟರ್ ಗೆ ಹಾಕಿ ನೋಡಿದೆ. ಈ os ಅನ್ನು ಇನ್ಸ್ಟಾಲ್ ಮಾಡೋದು ಅಷ್ಟು ಕಷ್ಟ ಅನ್ನಿಸಲಿಲ್ಲ. ಅನುಭವ ಇಲ್ಲದವರೂ ಸಹ os ಅನ್ನು ಹಾಕುವ ಸ್ಟೆಪ್ಸ್ ಗಳನ್ನ ಕೆಲವು ಬಾರಿ ಓದಿ, ಕೆಲವು ಬಾರಿ ಅಭ್ಯಾಸ ಮಾಡಿ ಸುಲಭವಾಗಿ ಹಾಕ್ಕೊಳ್ಳಬಹುದು .

ಲಿನಕ್ಸ್ os ಅನ್ನು ಹಾಕ್ಕೊಂಡ ಮೊದಲ ಕೆಲವು ನಿಮಿಷದಲ್ಲಿ ನಂಗೆ ಅಚ್ಚರಿ ಅನ್ಸಿದ್ದು ಅದ್ರೊಳಗೆ ಮೊದಲಿಂದನೇ ಇದ್ದ ಸಾಫ್ಟ್ವೇರ್ ಗಳು. word, excel, powerpoint, browser , video - audio player ಹಿಂಗೇ ಉಪಯೋಗಕ್ಕೆ ಬೇಕಿರೋ ಎಲ್ಲ basic ಸಾಫ್ಟ್ವೇರ್ ಗಳು ಅಲ್ಲಿದ್ವು. ಎಲ್ಲವೂ ಚೆನ್ನಗಿರೋವಂಥವೇ ಆಗಿದ್ವು. ಇಡೀ os ೨ಜಿಬಿ ಅಷ್ಟು ಗಾತ್ರದ್ದಾಗಿದ್ರೂ ಬೇಕಿರೋ ಹಾರ್ಡ್ವೇರ್ ಡ್ರೈವರ್ ಸಾಫ್ಟ್ವೇರ್, ಇತರೆ ಸಾಫ್ಟ್ವೇರ್ ಎಲ್ಲವೂ ಇದ್ವು. ನಾನಾಗೆ ಡ್ರೈವರ್ ಹಾಕ್ಕೋಬೇಕು ಅನ್ನೋ ಕಷ್ಟ ಸಹ ಬರಲಿಲ್ಲ.

ಜೂನ್ ೨೦, ಇಪ್ಪತ್ತೊಂದನೇ ದಿನ

೧೮ ದಿನ ಆಗಿದೆ, ವಿಡಿಯೋ ಎಡಿಟಿಂಗ್ ಒಂದಕ್ಕೆ ಅಷ್ಟೇ ವಿಂಡೋಸ್ ಬಳಸಿದ್ದು. ಬೇರೆ ಎಲ್ಲ ಕೆಲಸ ಮಾಡುವಾಗ ಲಿನಕ್ಸ್ ಕಷ್ಟ ಅಂತಾಗಲಿ, ಅಥವಾ ಇದ್ರಲ್ಲಿ ಏನೋ ಸರಿ ಇಲ್ಲ ಅಥವಾ features ಕಡಿಮೆ ಆಯ್ತು ಅಂತಾಗಲಿ ಅನ್ನಿಸ್ಸಿಲ್ಲ. ವಿಡಿಯೋ ಎಡಿಟಿಂಗ್ ಗೂ ಸಹ ಪ್ರೋಗ್ರಾಮ್ ಗಳು ಇದ್ದಾವೆ, ಆದ್ರೆ ಮತ್ತೆ ನಾ ಹೊಸ ಟೂಲ್ ಕಲಿಯುವಂಥ ಮನಸ್ಥಿತಿಯಲ್ಲಿಲ್ಲ. ಅದಕ್ಕೆ ಅದೊಂದು ಕೆಲಸಕ್ಕೆ ವಿಂಡೋಸ್ ನ ಬಳಸ್ತಿದ್ದೀನಿ. ಅದಕ್ಕೂ ಹೊಸ ಟೂಲ್ ಕಲಿತರೆ ವಿಂಡೋಸ್ os ನ ಪೂರ್ತಿಯಾಗಿ ಕೈ ಬಿಡಬಹುದು ಅಂತ ಅನ್ನಿಸ್ತಿದೆ.

ಜೂನ್ ೩೦, ಬರೋಬ್ಬರಿ ಒಂದು ತಿಂಗಳು

ವಿಂಡೋಸ್ os ಅನ್ನು ಬಿಟ್ಟು ಒಂದು ತಿಂಗಳ ಮೇಲಾಗಿದೆ. ವಿಡಿಯೋ ಎಡಿಟಿಂಗ್ ಒಂದು ಕೆಲಸ ಬಿಟ್ಟು ಬೇರೆಲ್ಲ ಕೆಲಸ ಲಿನಕ್ಸ್ ನಲ್ಲೆ ಸರಾಗವಾಗಿ ನಡೀತಿದೆ. ಒಂದು ದಿನಕ್ಕೂ ಈ os ನಿಧಾನ ಆಗೋದು, ಅಥವಾ ಕೆಲಸ ಮಾಡುವಾಗ ಕಚ್ಕೊಳ್ಳೋದು ಅನ್ನೋ ಹಾಗೆ ಆಗ್ಲಿಲ್ಲ. ಇದನ್ನ ಬಳಸೋಕೆ ಬಹಳ ಚಂದ ಅಂತ ಅನ್ನಿಸ್ತಿದೆ. ಹೆಚ್ಚಿನ ಜನಕ್ಕೆ ಇದರ ಬಗ್ಗೆ ತಿಳುವಳಿಕೆ ಇಲ್ಲದೆ ಇದನ್ನ ಬಳಸೋರು ಕಡಿಮೆ ಅಂತ ಅನ್ಸುತ್ತೆ. ಕಂಪ್ಯೂಟರ್ ಗೇಮ್ಸ್ ಆಡೋದು, ವಿಡಿಯೋ - ಫೋಟೋ ಎಡಿಟಿಂಗ್ ಬಿಟ್ಟು ಇನ್ನೆಲ್ಲಕ್ಕೂ ಲಿನಕ್ಸ್ ಮಿಂಟ್ os ತುಂಬಾ ಸೊಗಸಾಗಿದೆ ಅಂತ ಮತ್ತೆ ಮತ್ತೆ ಅನ್ನಿಸ್ತಿದೆ.

ಜುಲೈ ೨೫, ಮತ್ತೊಂದು ತಂಗಳ ನಂತರ

ಲಿನಕ್ಸ್ ನಲ್ಲಿ ನಾವು ಯಾವ್ದಾದ್ರು ಸಾಫ್ಟ್ವೇರ್ ನ ತೆಗೀಬೇಕು ಅಂತಂದ್ರೆ , ಈಗಾಗಲೇ ಹಾಕ್ಕೊಂಡಿರೋ ಸಾಫ್ಟ್ವೇರ್ ಗಳ ಪಟ್ಟಿ ಒಂದು ಕಡೆ ಸುಲಭವಾಗಿ ಸಿಗಲ್ಲ. ಅದಕ್ಕೆ ಒಂದೆರೆಡು ಸಾಲು ಕಮಾಂಡ್ ಗಳ ಬರೆದು, ಬರುವ ಎಲ್ಲ ಸಾಫ್ಟ್ವೇರ್ ಗಳಲ್ಲಿ ನಮಗೆ ಬೇಕಿರೋದು ಯಾವ್ದು ಅಂತ ನೋಡಿ, ಅದನ್ನ ಮತ್ತೆ ಕಮಾಂಡ್ ಬರೆದು ತಿಳಿಸುವ ಮೂಲಕ ತೆಗೀಬೇಕು. ಹೆಚ್ಚಿನವನ್ನ ಹೀಗೆ ತೆಗೀಬೇಕು. 'ಸಾಫ್ಟ್ವೇರ್ ಸೆಂಟರ್ ' ಮೂಲಕ ಹಾಕಿಕೊಂಡ ಕೆಲವನ್ನ ಮಾತ್ರ 'ಸಾಫ್ಟ್ವೇರ್ ಸೆಂಟರ್ ' ನ ಮೂಲಕ ಸುಲಭವಾಗಿ ತೆಗಿಬೋದು. ಆದರೂ ಬಳಕೆದಾರರು ಹಾಕಿಕೊಂಡ ಎಲ್ಲ ಸಾಫ್ಟ್ವೇರ್ ಗಳು ಒಂದೆಡೆ ಪಟ್ಟಿಯಾಗಿರದೆ ಇರೋದು ಒಂದು ದೊಡ್ಡ ಹಿನ್ನೆಡೆ.

ಆಗಸ್ಟ್ ೩೦, ತಿರುಗಿ ವಿಂಡೋಸ್ ನ ಕಡೆಗೆ

ಲಿನಕ್ಸ್ ಎಷ್ಟೇ ಚೆನ್ನಾಗಿದ್ದರೂ, ಎಲ್ಲ ಕೆಲಸವನ್ನ ಎಷ್ಟೇ ಚೆನ್ನಾಗಿ ಮಾಡಿದರೂ ಸದ್ಯಕ್ಕಂತೂ ಅಲ್ಲಿ ಅಪ್ಲಿಕೇಷನ್ ಗಳ ದೊಡ್ಡ ಕೊರತೆ ಇದೆ. ಮೊದಲಿಂದ ಎಲ್ಲ ಅಪ್ಲಿಕೇಷನ್ ಗಳ ಬರೀ ವಿಂಡೋಸ್ OS ಅನ್ನೆ ಗುರಿ ಅಂತ ಇತ್ಕೊಂಡು ಸಿದ್ಧ ಪಡಿಸಿರೋದ್ರಿಂದ, ಆವೆ app ಗಳು ಲಿನಕ್ಸ್ ಅಲ್ಲಿಲ್ಲ, ಬದಲಿ appಗಳು ಇದ್ರೂ ಮತ್ತೆ ಹೊಸ app ಕಲಿಯುವಷ್ಟು ಹೊತ್ತು ಎಲ್ರಿಗು ಕೊಡೋಕಾಗಲ್ಲ. ಹಾಕ್ಕೊಂಡಿರೋ ಅಪ್ಲಿಕೇಷನ್ ಗಳ ತೆಗೆಯೋವಂತ ಸಣ್ಣ ಕೆಲಸಕ್ಕೂ ಪರದಾಡಬೇಕು. ಹಾಕ್ಕೊಂಡಿರೋ ಎಲ್ಲ app ಗಳ ಪಟ್ಟಿ ಒಂದು ಕಡೆ ಸಿಗೋದಿಲ್ಲ. ಇಂಥವೇ ಒಂದಷ್ಟು ಕಾರಣಗಳಿಂದ ನಾನು ತಿರುಗಿ ವಿಂಡೋಸ್ ಕಡೆಗೆ ಹೊರಟಿದ್ದೀನಿ. ಮತ್ತೆ ಮುಂದೊಂದು ದಿನ ಬಂದು ಲಿನಕ್ಸ್, ಅಲ್ಲಿ ಸಿಗೋ app ಗಳ ಬಳಸಿ ಜೀವನ ನಡೆಸೊ ಪ್ರಯತ್ನ ಮಾಡ್ತೀನಿ. ಅಲ್ಲಿವರೆಗೂ ....

ಜೂನ್ ೧೭, 2023. ಮತ್ತೆ ಲಿನಕ್ಸ್ ಬಳಸುವ ಪ್ರಯತ್ನ

ಆದ್ರೆ ಈ ಸರಿ ಪೂರ್ತಿ ಲಿನಕ್ಸ್ ಅನ್ನೆ ಬಳಸೊ ಮನಸ್ಸಿಲ್ಲ,. ಬದಲಿಗೆ ಸಾಫ್ಟ್ವೇರ್ ಡೆವಲಪ್ಮೆಂಟ್ ಕೆಲಸಕ್ಕೆ ಮಾತ್ರ ಲಿನಕ್ಸ್ ಬಳಸೊ ಯೋಚನೆ. ಲಿನಕ್ಸ್ ಅಲ್ಲಿ ಒಮ್ಮೆ programming ಮಾಡಿದ್ರೆ, ತಿರುಗಿ windows ಅಲ್ಲಿ programming ಮಾಡೋಕಾಗಲ್ಲ. ಅಷ್ಟರ ಮಟ್ಟಿಗೆ ಲಿನಕ್ಸ್ ಅಲ್ಲಿ ಸಾಫ್ಟ್ವೇರ್ ಡೆವಲಪರ್ಸ್ ಗಳಿಗೆ ಸೊಗಸಾದ ಟೂಲ್ಸ್, ಸರಾಗವಾದ installations ಅದರಲ್ಲಿದೆ. ಲಿನಕ್ಸ್ CLI ಎಷ್ಟು ಫ್ಲೆಕ್ಸಿಬಲ್ ಆಗಿದೆ ಅಂದ್ರೆ, ಲಿನಕ್ಸ್ CLI ನ ಬಳಸಿದ ಮೇಲೆ ವಿಂಡೋಸ್ os CLI ನ ಹತ್ರಕ್ಕೂ ಹೋಗೋ ಮನಸ್ಸಾಗಲ್ಲ.